View All Drawers

Collage – Marco Santini

ಕೊಲಾಜ್ - ಮಾರ್ಕೊ ಸ್ಯಾಂಟಿನಿ

Born during Covid, out of his deep dive into the lives and practices of modern masters in the West, the Signature Series is entirely unique to Marco Santini. who calls this new category of art ‘Illuminism’. 

For the works in this series, Santini takes rare, signed artist books from Pablo Picasso, Roy Lichtenstein, Jean-Michel Basquiat or Georgia O’Keefe, and transforms them, cover to cover, extracting the very soul of the book, into a single visual story. While these three-dimensional artworks might seem like they’re a type of collage, they are so much more than that. In Santini’s words, “With collage you can cut things out and move them around. But in my Signature Series works, a majority of what you see is the page exactly where it was when the artist signed the work. I’m not moving that much around. I’m trying to keep it as authentic as possible. And that’s why I believe the works actually shine a light on the essence of the book, and on the artist and their works in a very respectful way to understand who they were and to bring their story to light.”

Read more about this on MAP’s Read section here.

ಕೋವಿಡ್ ಸಮಯದಲ್ಲಿ ಜನಿಸಿದ, ಪಶ್ಚಿಮದ ಆಧುನಿಕ ಮಾಸ್ಟರ್ಗಳ ಜೀವನ ಮತ್ತು ಅಭ್ಯಾಸಗಳಲ್ಲಿ ಆಳವಾಗಿ ಧುಮುಕಿದ ಮಾರ್ಕೊ ಸ್ಯಾಂಟಿನಿಯವರ ಸಿಗ್ನೇಚರ್ ಸರಣಿಯು ಸಂಪೂರ್ಣವಾಗಿ ವಿಶಿಷ್ಟವಾಗಿದೆ. ಅವರು ಈ ಹೊಸ ವರ್ಗದ ಕಲೆಯನ್ನು 'ಇಲ್ಯುಮಿನಿಸಂ' ಎಂದು ಕರೆಯುತ್ತಾರೆ. 

ಈ ಸರಣಿಯಲ್ಲಿನ ಕೃತಿಗಳಿಗಾಗಿ, ಸ್ಯಾಂಟಿನಿಯವರು ಪ್ಯಾಬ್ಲೋ ಪಿಕಾಸೊ, ರಾಯ್ ಲಿಚ್ಟೆನ್‌ಸ್ಟೈನ್, ಜಾನ್-ಮೈಕೆಲ್ ಬಾಸ್ಕ್ವಿಯಾಟ್ ಅಥವಾ ಜಾರ್ಜಿಯಾ ಓಕೀಫ್‌ರಿಂದ ಅಪರೂಪದ, ಸಹಿ ಮಾಡಿದ ಕಲಾ ಪುಸ್ತಕಗಳ ಆತ್ಮವನ್ನೇ ಮೊದಲ ಹಾಳೆಯಿಂದ ಕೊನೆಯವರೆಗೂ ಹೊರತೆಗೆದು ದೃಶ್ಯ ಕಥೆಯಾಗಿಸುತ್ತಾರೆ. ಈ ಮೂರು ಆಯಾಮದ ಕಲಾಕೃತಿಗಳು ಒಂದು ರೀತಿಯ ಕೊಲಾಜ್‌ನಂತೆ ತೋರುತ್ತಿದ್ದರೂ, ಅವು ಅದಕ್ಕೂ ಮಿಗಿಲಾದ ಕೃತಿಗಳಾಗಿವೆ. ಸ್ಯಾಂಟಿನಿಯ ಹೇಳುವಂತೆ, “ಕೊಲಾಜ್‌ನಲ್ಲಿ ನೀವು ವಸ್ತುಗಳನ್ನು ಕತ್ತರಿಸಿ ಬೇಕಾದ ಹಾಗೆ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ನನ್ನ ಸಿಗ್ನೇಚರ್ ಸೀರೀಸ್ ಕೃತಿಗಳಲ್ಲಿ, ನೀವು ನೋಡುವ ಬಹುಪಾಲು ಪುಟವು ಕಲಾವಿದರು ಪುಸ್ತಕಕ್ಕೆ ಸಹಿ ಹಾಕಿದಾಗ ಅದು ಹೇಗಿತ್ತೋ ಹಾಗೇ ನಿಖರವಾಗಿ ಇದ್ದ ಪುಟವಾಗಿದೆ. ನಾನದನ್ನು ಹೆಚ್ಚು ಬದಲಾಯಿಸಿಲ್ಲ. ಅಂತೆಯೇ ಸಾಧ್ಯವಾದಷ್ಟು ಅಧಿಕೃತವಾಗಿ ಇರಿಸಲು ಪ್ರಯತ್ನಿಸಿದ್ದೇನೆ. ಅದಕ್ಕಾಗಿಯೇ ಕೃತಿಗಳು ಪುಸ್ತಕದ ಸಾರ ಮತ್ತು ಕಲಾವಿದರು ಮತ್ತು ಅವರ ಕೃತಿಗಳ ಮೇಲೆ ಅವರು ಯಾರೆಂದು ಅರ್ಥಮಾಡಿಕೊಳ್ಳಲು ಮತ್ತು ಅವರ ಕಥೆಯನ್ನು ಬೆಳಕಿಗೆ ತರಲು ಬಹಳ ಗೌರವಯುತ ರೀತಿಯಲ್ಲಿ ಬೆಳಕು ಚೆಲ್ಲುತ್ತವೆ ಎಂದು ನನಗೆ ನಂಬಿಕೆ ಇದೆ.”

ಇಲ್ಲಿ ಎಂ ಎ ಪಿ ಯ  ಓದಿ ವಿಭಾಗದಲ್ಲಿ ಇದರ ಬಗ್ಗೆ ಇನ್ನಷ್ಟು ಓದಿ.

Click on an object to learn more

Like What You See? There's More

Discover the complete collection.

Explore More