View All Drawers

Jamawar Fragments

ಜಾಮಾವಾರ್ ತುಣುಕುಗಳು

Jamawar is a woollen textile believed to have originated in Kashmir. It is characterised by distinct floral all-over patterns woven as a web, known as jaaldar, or repeat motifs known as butidar. Derived from the Persian, jama (robe) and war (yard), jamawars were commonly sold as yardage to be tailored into robes for men. Jamawars reached the peak of their popularity during the sixteenth century when Mughal emperors favoured paisley patterns and stylised flowers, such as roses, carnations and irises. From the late nineteenth century, jamawars were also woven in Punjab and parts of northern Uttar Pradesh. The fragments in this drawer could be from shawls or yardage.

ಜಾಮಾವಾರ್  ಉಣ್ಣೆಯ ಬಟ್ಟೆಯಾಗಿದ್ದು ಇದರ ಉಗಮ ಕಾಶ್ಮೀರದಲ್ಲಿ ಆಯಿತು ಎನ್ನಲಾಗುತ್ತದೆ. ಇದು ವಿಭಿನ್ನವಾದ  ಬಲೆಯಂತೆ ನೇಯ್ದ ಹೂವಿನ ಮಾದರಿಗಳಿಂದ ಸಂಪೂರ್ಣವಾಗಿ ತುಂಬಿರುವ ಜಾಲ್ದಾರ್ ಅಥವಾ ಬೂಟಿದಾರ್ ಎಂದು ಕರೆಯಲ್ಪಡುವ ಪುನರಾವರ್ತಿತ ವಿನ್ಯಾಸಗಳಿಂದ ನಿರೂಪಿಸಲ್ಪಟ್ಟಿದೆ. ಪರ್ಷಿಯನ್ ಪದಗಳಾದ ಜಾಮಾ  (ಅಂಗಿ) ಮತ್ತು ವಾರ್  (ಗಜ-ಅಳತೆ) ಎರಡೂ ಸೇರಿ ಇದರ ಹೆಸರು ಬಂದಿದೆ. ಜಾಮಾವಾರ್ ಗಳನ್ನು ಸಾಮಾನ್ಯವಾಗಿ ಪುರುಷರಿಗೆ ನಿಲುವಂಗಿಗೆ ತಕ್ಕ ಅಳತೆಯಂತೆ ಮಾರಾಟ ಮಾಡಲಾಗುತ್ತಿತ್ತು. ಹದಿನಾರನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿಗಳು ಪೈಸ್ಲಿ ಮಾದರಿಗಳು ಮತ್ತು ಶೈಲೀಕೃತ ಹೂವುಗಳಾದ ಗುಲಾಬಿಗಳು, ಸೇವಂತಿಗೆ ರೀತಿಯ ಹೂವುಗಳು ಮತ್ತು ನೀಲಿ ಕುಸುಮಗಳ ಬಗ್ಗೆ ಒಲವು ತೋರಿದರು. ಆಗ ಜಾಮಾವಾರ್  ತಮ್ಮ ಜನಪ್ರಿಯತೆಯ ಉತ್ತುಂಗವನ್ನು ತಲುಪಿದವು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಿಂದ, ಪಂಜಾಬ್ ಮತ್ತು ಉತ್ತರ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಜಾಮಾವಾರ್ ಗಳನ್ನು ನೇಯಲಾಯಿತು. ಈ ಡ್ರಾಯರ್‌ನಲ್ಲಿರುವ ತುಣುಕುಗಳು ಶಾಲುಗಳು ಅಥವಾ ಅಂಗಿಗಳ ಭಾಗವಾಗಿರಬಹುದು.

Click on an object to learn more

Like What You See? There's More

Discover the complete collection.

Explore More