View All Drawers

Studies of the Taj Mahal (Pietra Dura)

ತಾಜ್ ಮಹಲ್ ಅಧ್ಯಯನಗಳು (ಪಿಯೆಟ್ರ ಡ್ಯೂರ)

Pietra dura (meaning ‘hard work’ in Italian) is an inlay technique using precious or semi-precious stones set in hard stone such as marble, creating exquisite imagery. The technique was popularised by the Mughal Emperor, Shah Jahan, who used it in the construction of the Taj Mahal. Gemstones and semi-precious stones such as agate, carnelian, amethyst, malachite and turquoise were brought to Agra from distant places, thinly and precisely carved and then inserted into corresponding slots in the hard marble. 

The drawer displays painting studies of pietra dura ornamentation on the Taj Mahal, as also photographs that highlight the monument's grand scale.

ಅಮೃತಶಿಲೆಯಂತಹ ಗಟ್ಟಿಯಾದ ಕಲ್ಲಿನಲ್ಲಿ ಅಮೂಲ್ಯ ಅಥವಾ ಅರೆ-ಅಮೂಲ್ಯ ಹರಳುಗಳನ್ನು ಅಥವಾ ಕಲ್ಲುಗಳನ್ನು ಹೊಂದಿಸಿ ಸೃಷ್ಟಿ ಮಾಡುವ ಸೃಜನಾತ್ಮಕ ಕೆತ್ತನೆಯ ತಂತ್ರವನ್ನು ಪಿಯೆಟ್ರಾ ಡ್ಯೂರ (ಇಟಾಲಿಯನ್ ಭಾಷೆಯಲ್ಲಿ 'ಕಠಿಣ ಕೆಲಸ' ಎಂದರ್ಥ)ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಈ ತಂತ್ರವನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತಾಜ್ ಮಹಲ್ ನಿರ್ಮಾಣದಲ್ಲಿ ಬಳಸಿ ಜನಪ್ರಿಯಗೊಳಿಸಿದರು. ಅಗೇಟ್, ಕಾರ್ನೆಲಿಯನ್, ಅಮೆಥಿಸ್ಟ್, ಮಲಾಕೈಟ್ ಮತ್ತು ವೈಡೂರ್ಯದಂತಹ ರತ್ನದ ಕಲ್ಲುಗಳು ಮತ್ತು ಅರೆ-ಅಮೂಲ್ಯ ಕಲ್ಲುಗಳನ್ನು ದೂರದ ಸ್ಥಳಗಳಿಂದ ಆಗ್ರಾಕ್ಕೆ ತರಿಸಿ, ಇವುಗಳನ್ನು ಕೂರಿಸುವ ವಿನ್ಯಾಸಗಳನ್ನು ಗಟ್ಟಿಯಾದ ಅಮೃತಶಿಲೆಯಲ್ಲಿ ಮಾಡಿ ಈ ಕಲ್ಲುಗಳನ್ನು ತೆಳುವಾಗಿ ಮತ್ತು ನಿಖರವಾಗಿ ಕೊರೆದು ಹೊಂದುವ ಹಾಗೆ ಸೇರಿಸಲಾಯಿತು.

ಇಲ್ಲಿರುವ ಡ್ರಾಯರ್ ತಾಜ್ ಮಹಲ್‌ನಲ್ಲಿ ಪಿಯೆಟ್ರಾ ಡ್ಯೂರ ಅಲಂಕರಣದ ಚಿತ್ರಕಲೆ ಅಧ್ಯಯನಗಳನ್ನು ಪ್ರದರ್ಶಿಸುತ್ತಲೇ, ಈ ಸ್ಮಾರಕದ ಬೃಹತ್ ಗಾತ್ರವನ್ನು ಮನದಟ್ಟು ಮಾಡುವ ಛಾಯಾಚಿತ್ರಗಳನ್ನೂ ಸಹ ಪ್ರದರ್ಶಿಸುತ್ತದೆ.

Click on an object to learn more

Like What You See? There's More

Discover the complete collection.

Explore More