View All Drawers

Regional Schools of Indian Miniature Paintings

ಭಾರತೀಯ ಚಿಕಣಿ ಚಿತ್ರಕಲೆಯ ಪ್ರಾದೇಶಿಕ ಶಾಲೆಗಳು

Schools of miniature painting tend to differ according to the region they originated from. The primary schools of painting seen here are Malwa, Deccan, and Pahari. 

The Pahari School of painting flourished from the seventeenth to the nineteenth centuries, from Jammu to the Garhwal region in North India. Some of the notable styles under the Pahari School are Basohli, Mankot, Nurpur, Chamba, Kangra, Guler, Kullu-Mandi and Garhwal. 

The Malwa School of miniature painting evolved from the thirteenth to the eighteenth centuries in the Malwa and Bundelkhand regions – currently Madhya Pradesh in India. Some of the themes explored in the Malwa school are the Ragamalas, Rasikapriya, Radha-Krishna and the Ramayana. 

The Deccan School of miniature painting flourished from the late sixteenth century under the patronage of the Deccani sultanates in Central India. 

The artworks seen here are primarily Ragamala (garland of ragas, or musical modes) miniatures. A unique phenomenon that synthesises music, poetry and painting, each miniature illustrates a verse which evokes the mood of a specific raga. The verses are generally written either on the top margin or on the reverse of the painting. While many of these paintings depict the romantic love between Krishna and Radha, they also connote a divine love between the raga (a melody of Indian classical music personified as a hero) and the ragini (derivative of the raga, personified as the heroine). While the ragas were meant to depict changes in seasons, raginis were meant to humanise these temporal changes. 

Read more about Ragamala paintings with the MAP Academy.

ಚಿಕಣಿ ಚಿತ್ರಕಲೆಯ ಶಾಲೆಗಳು ಅವು ಹುಟ್ಟಿದ ಪ್ರದೇಶಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಮಾಲ್ವಾ, ಡೆಕ್ಕನ್ ಮತ್ತು ಪಹಾಡಿ  ಇಲ್ಲಿ ಕಂಡುಬರುವ ಚಿತ್ರಕಲೆಯ ಪ್ರಾಥಮಿಕ ಶಾಲೆಗಳಾಗಿವೆ.

ಪಹಾಡಿ ಚಿತ್ರಕಲೆಯ ಶೈಲಿಯು ಹದಿನೇಳನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೆ, ಜಮ್ಮುವಿನಿಂದ ಉತ್ತರ ಭಾರತದ ಗರ್ವಾಲ್ ಪ್ರದೇಶದವರೆಗೆ ಪ್ರವರ್ಧಮಾನಕ್ಕೆ ಬಂದಿತು. ಪಹಾಡಿ  ಶೈಲಿಯ ಅಡಿಯಲ್ಲಿ ಬರುವ ಕೆಲವು ಗಮನಾರ್ಹ ಶೈಲಿಗಳೆಂದರೆ ಬಸೋಹ್ಲಿ, ಮಾನ್ಕೋಟ್, ನೂರ್ಪುರ್, ಚಂಬಾ, ಕಾಂಗ್ರಾ , ಗುಲೇರ್, ಕುಲು-ಮಂಡಿ ಮತ್ತು ಗರ್ವಾಲ್ ಎಂದು ಗುರುತಿಸಲಾಗಿದೆ.

ಮಾಲ್ವಾ ಚಿಕಣಿ ಚಿತ್ರಕಲೆಯು ಮಾಲ್ವಾ ಮತ್ತು ಬುಂದೇಲ್‌ಖಂಡ್ ಪ್ರದೇಶಗಳಲ್ಲಿ ಹದಿಮೂರನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೆ ವಿಕಸನಗೊಂಡಿತು. ಪ್ರಸ್ತುತ ಭಾರತದಲ್ಲಿ ಇದು ಮಧ್ಯಪ್ರದೇಶ ಎನಿಸಿಕೊಳ್ಳುತ್ತದೆ. ಮಾಲ್ವಾ ಶಾಲೆಯಲ್ಲಿ ರಾಗಮಾಲಾ , ರಸಿಕಪ್ರಿಯ, ರಾಧಾ-ಕೃಷ್ಣ ಮತ್ತು ರಾಮಾಯಣ ವಿಷಯಗಳ ಸುತ್ತ ಅನ್ವೇಷಣೆ ನಡೆಯಿತು.

ಡೆಕ್ಕನ್ ಚಿಕಣಿ ಚಿತ್ರಕಲೆ ಹದಿನಾರನೇ ಶತಮಾನದ ಉತ್ತರಾರ್ಧದಿಂದ ಮಧ್ಯ ಭಾರತದಲ್ಲಿ ದಕ್ಕನಿ ಸುಲ್ತಾನರ ಆಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದಿತು.

ಇಲ್ಲಿ ಕಂಡುಬರುವ ಕಲಾಕೃತಿಗಳು ಪ್ರಾಥಮಿಕವಾಗಿ ರಾಗಮಾಲಾ (ರಾಗಗಳ ಮಾಲೆ, ಅಥವಾ ಸಂಗೀತ ವಿಧಾನಗಳು) ಚಿಕಣಿಗಳಾಗಿವೆ. ಸಂಗೀತ, ಕವನ ಮತ್ತು ಚಿತ್ರಕಲೆಗಳನ್ನು ಸಂಯೋಜಿಸುವ ಒಂದು ವಿಶಿಷ್ಟ ರೀತಿಯಲ್ಲಿರುವ ಈ ಶೈಲಿಯ ಪ್ರತಿ ಚಿಕಣಿಯು ನಿರ್ದಿಷ್ಟ ರಾಗದ ಮನಸ್ಥಿತಿಯನ್ನು ಉತ್ತೇಜಿಸುವ ಪದ್ಯವನ್ನು ವಿವರಿಸುತ್ತದೆ. ಪದ್ಯಗಳನ್ನು ಸಾಮಾನ್ಯವಾಗಿ ಮೇಲಿನ ಅಂಚಿನಲ್ಲಿ ಅಥವಾ ಚಿತ್ರದ ಹಿಂದೆ ಬರೆಯಲಾಗುತ್ತದೆ. ಈ ವರ್ಣಚಿತ್ರಗಳಲ್ಲಿ ಹಲವು ಕೃಷ್ಣ ಮತ್ತು ರಾಧೆಯ ನಡುವಿನ ಪ್ರಣಯ ಪ್ರೇಮವನ್ನು ಬಿಂಬಿಸುತ್ತವೆಯಾದರೂ, ಅವು ರಾಗ (ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ಮಧುರ ಗೀತೆ) ಮತ್ತು ರಾಗಿಣಿ (ರಾಗದ ವ್ಯುತ್ಪನ್ನವನ್ನು ನಾಯಕಿಯಾಗಿ ನಿರೂಪಿಸಲಾಗಿದೆ) ನಡುವಿನ ದೈವಿಕ ಪ್ರೇಮವನ್ನು ಸೂಚಿಸುತ್ತವೆ. ರಾಗಗಳು ಋತುಗಳ ಬದಲಾವಣೆಗಳನ್ನು ಚಿತ್ರಿಸಲು ಉದ್ದೇಶಿಸಿದ್ದರೆ, ರಾಗಿಣಿಗಳು ಈ ತಾತ್ಕಾಲಿಕ ಬದಲಾವಣೆಗಳನ್ನು ಮಾನವೀಯಗೊಳಿಸಲು ಉದ್ದೇಶಿಸಿದ್ದರು.

ಎಂ ಎ ಪಿ  ಅಕಾಡೆಮಿಯಲ್ಲಿ  ರಾಗಮಾಲಾ ವರ್ಣಚಿತ್ರಗಳ ಕುರಿತು ಇನ್ನಷ್ಟು ಓದಿ.

Click on an object to learn more

Like What You See? There's More

Discover the complete collection.

Explore More