Explore MAP’s exhibition, The Forgotten Souvenir, through a guided walk and discover how the art of mica paintings, created during the East India Company’s heyday. These paintings, both art and historical documents, showcase professions, societal roles, and colonial India’s rigid caste and class systems and thus, offer unique insights into everyday life under colonial rule.
These delicate works, painted on thin sheets of muscovite mica from Murshidabad, Patna, and Trichinopoly, reflect the adaptation of Indian artists as royal patronage declined. They served as easily portable, attractive souvenirs for British travellers, bridging the gap between traditional miniature painting and the rise of photography.
Accompanied by Amit Dutta’s short film Moments before Mutiny and an interactive game, this guided walk invites you to journey deeper into this nearly forgotten chapter of Indian art.
This guided walk will be conducted in Kannada by Rajesh K from the MAP Team.
MAP ನ ಇತ್ತೀಚಿನ ಪ್ರದರ್ಶನ, ‘ನೆನಪಳಿದ ಸ್ಮರಣಿಕೆ’ಯನ್ನು ಮಾರ್ಗದರ್ಶಿ ನಡಿಗೆಯ ಮೂಲಕ ಅನ್ವೇಷಿಸಿ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಉತ್ತುಂಗದ ದಿನಗಳಲ್ಲಿ ಆಭ್ರಕ ಬಳಸಿ (ಮೈಕಾ) ರಚಿಸಲಾದ ವರ್ಣಚಿತ್ರಗಳ ಕಲೆ ಹೇಗೆ ಅರಳಿತು ಎಂದು ಅನ್ವೇಷಿಸಬಹುದು. ಕಲೆ ಮತ್ತು ಐತಿಹಾಸಿಕ ದಾಖಲೆಗಳೆರಡೂ ಆಗಿರುವ ಈ ವರ್ಣಚಿತ್ರಗಳು, ವೃತ್ತಿಗಳು, ಸಾಮಾಜಿಕ ಪಾತ್ರಗಳು ಮತ್ತು ವಸಾಹತುಶಾಹಿ ಭಾರತದ ದಿನಗಳಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆಗಳು ಎಷ್ಟು ಕಠಿಣವಾಗಿ ವರ್ಗೀಕರಿಸಲ್ಪಟ್ಟಿದ್ದವು ಎಂಬ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅಷ್ಟೇ ಅಲ್ಲದೆ ಈ ಚಿತ್ರಗಳು ವಸಾಹತುಶಾಹಿ ಆಳ್ವಿಕೆಯ ಸಮಯದಲ್ಲಿ ಜನರ ದೈನಂದಿನ ಜೀವನಗಳು ಹೇಗಿದ್ದವು ಎನ್ನುವ ಬಗ್ಗೆ ಅನನ್ಯ ಒಳನೋಟಗಳನ್ನು ನೀಡುತ್ತವೆ.
ಮುರ್ಷಿದಾಬಾದ್, ಪಾಟ್ನಾ ಮತ್ತು ಟ್ರಿಚಿನೋಪೊಲಿಯ ಮಸ್ಕೊವೈಟ್ ಅಭ್ರಕದ ತೆಳುವಾದ ಪದರಗಳ ಮೇಲೆ ಚಿತ್ರಿಸಲಾದ ಈ ಸೂಕ್ಷ್ಮ ಕೃತಿಗಳು, ರಾಜಮನೆತನದ ಬೆಂಬಲ ಹಾಗೂ ಪ್ರೋತ್ಸಾಹ ಕಡಿಮೆಯಾದಂತೆ ಭಾರತೀಯ ಕಲಾವಿದರು ಅವುಗಳನ್ನು ರೂಪಾಂತರಿಸಿದ ಬಗೆಯನ್ನು ಪ್ರತಿಬಿಂಬಿಸುತ್ತವೆ. ಬ್ರಿಟಿಷ್ ಪ್ರಯಾಣಿಕರು ಸುಲಭವಾಗಿ ಸಾಗಿಸಬಹುದಾದ, ಆಕರ್ಷಕವಾದ ಸ್ಮಾರಕಗಳಾಗಿ ಅವುಗಳು ಬಳಕೆಯಾದವು. ಸಾಂಪ್ರದಾಯಿಕ ಚಿಕಣಿ ಚಿತ್ರಕಲೆ ಮತ್ತು ಛಾಯಾಗ್ರಹಣದ ಉದಯದ ನಡುವಿನ ಅಂತರದಲ್ಲಿ ಕಾಣಿಸಿಕೊಂಡವು.
ಅಮಿತ್ ದತ್ತ ಅವರ ಕಿರುಚಿತ್ರ “ಮೊಮೆಂಟ್ಸ್ ಬಿಫೋರ್ ಮ್ಯುಟಿನಿ” ಮತ್ತು ಸಂವಾದಾತ್ಮಕ ಕ್ರೀಡೆಯೊಂದಿಗೆ, ಈ ಮಾಹಿತಿಯುಕ್ತ ನಡಿಗೆಯು ಕಾಲದಲ್ಲಿ ಕರಗಿಹೋದ ಈ ಭಾರತೀಯ ಕಲೆಯ ಅಧ್ಯಾಯದ ಬಗ್ಗೆ ತಿಳಿಯಲು ನಿಮ್ಮನ್ನು ಆಹ್ವಾನಿಸುತ್ತದೆ.
MAP ತಂಡದ ರಾಜೇಶ್ ಕೆ ಅವರು ಈ ಮಾಹಿತಿಯುಕ್ತ ನಡಿಗೆಯನ್ನು ಕನ್ನಡದಲ್ಲಿ ನಡೆಸಿಕೊಡಲಿದ್ದಾರೆ.
Artist Walk with Tarik Currimbhoy October 11, 2024
Curator-Led Guided Walk January 17, 2025
Eckart Muthesius and Manik Bagh – Pioneering Modernism in India January 27, 2025
A Curatorial Perspective: Chay Reds, Ferrous Black November 9, 2024
Rhyme Unbroken — Krishna Reddy as Artist and Perpetual Student December 21, 2024
Hello and Goodbye (Hindi and Kannada) August 12, 2024