Jangama Collective
Join us for a theatre performance by Jangama Collective as part of our Inclusion Conference.
Art looks at life through a framework. As it happens a lot of our lives fall outside of it, as does ‘Song of the Ghetto’ which is an unscripted, de-structured piece. The form and practice of theatre blossoms organically, responds to the times it is created in and takes its own unique form. Similarly this performance is a curation of vignettes that defies formal structure and brings to the fore a harmony of the culture that the performers embody. It is a retelling of their lives through song and storytelling; celebrating their lifestyles including the adversities they face.
This piece was created by the initiative of the Savithribai Phule Women’s Co-operative Group, Dingdur in collaboration with Jangama Collective, Bangalore and Guild of the Goat, New Delhi.
ಕಲೆಯು ಜೀವನವನ್ನು ಒಂದು ಚೌಕಟ್ಟಿನಿಂದ ನೋಡುತ್ತದೆ. ನಮ್ಮ ಜೀವನದ ಬಹುಪಾಲು ‘ಕೇರಿ ಹಾಡು’ ನಾಟಕದಂತೆ ಈ ಚೌಕಟ್ಟಿನ ಹೊರಗಿದೆ – ಇದೊಂದು ಸಾಮೂಹಿಕ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ರೂಪುಗೊಂಡ ನಾಟಕ. ಇದರಲ್ಲಿ ರಂಗದ ಮೇಲೆ ಅಭಿನಯಿಸುವ ಕಲಾವಿದರ ನೈಜ ಜೀವನ ಅನುಭವಗಳು ಮತ್ತು ಕಥೆಗಳೇ ಅಡಕವಾಗಿವೆ. ರಂಗಭೂಮಿಯ ರೂಪ ಮತ್ತು ಅಭ್ಯಾಸ ನೈಸರ್ಗಿಕವಾಗಿ ಬೆಳೆಯುತ್ತದೆ, ತನ್ನ ಕಾಲಘಟ್ಟಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ವಿಶಿಷ್ಟ ರೂಪ ಪಡೆಯುತ್ತದೆ. ಹಾಗೆಯೇ, ಈ ಪ್ರದರ್ಶನವೂ ಸಾಂಪ್ರದಾಯಿಕ ರಚನೆಯನ್ನು ಮೀರಿದ ಚಿತ್ರಣಗಳ ಸಂಕಲನವಾಗಿದ್ದು, ಕಲಾವಿದರ ಸಂಸ್ಕೃತಿಯ ಸಮಗ್ರತೆಯನ್ನು ಮುನ್ನೆಲೆಗೆ ತರುತ್ತದೆ. ಇದು ಅವರ ಬದುಕನ್ನು ಹಾಡು ಮತ್ತು ಕಥನಗಳ ಮೂಲಕ ಮರುಹೇಳುತ್ತಾ, ಅವರು ಎದುರಿಸುವ ಸವಾಲುಗಳೂ ಸೇರಿದಂತೆ ಅವರ ಜೀವನಶೈಲಿಯನ್ನು ಆಚರಿಸುತ್ತದೆ.
ಈ ಕಲಾಕೃತಿಯು ಸಾವಿತ್ರಿಬಾಯಿ ಫುಲೆ ಮಹಿಳಾ ಸಹಕಾರ ಸಂಘ, ದಿಂಡಗೂರು ಇವರ ಚಾಲನೆಯಲ್ಲಿ, ಜಂಗಮ ಕಲೆಕ್ಟಿವ್, ಬೆಂಗಳೂರು ಮತ್ತು ಗಿಲ್ಡ್ ಆಫ್ ದಿ ಗೋಟ್, ನವದೆಹಲಿ ಇವರ ಸಹಯೋಗದಿಂದ ರೂಪುಗೊಂಡಿದೆ.
ಹಿನ್ನೆಲೆ: ಬೆಂಗಳೂರಿನಿಂದ ಸುಮಾರು ೧೪೦ ಕಿಲೋಮೀಟರ್ ದೂರದಲ್ಲಿರುವ ದಿಂಡಗೂರು ಗ್ರಾಮವಿದೆ. ದೇಶದ ಇತರ ಹಲವು ಗ್ರಾಮಗಳಂತೆಯೇ, ಇಲ್ಲಿಯೂ ಊರ ಮಿತಿಯೊಳಗೆ ಒಂದು ಗಡಿ ಇದೆ – ಅದರಾಚೆಗೆ ದಲಿತರ ಕೇರಿ ಪ್ರಾರಂಭವಾಗುತ್ತದೆ. ಇತ್ತೀಚಿನವರೆಗೂ, “ಅಸ್ಪೃಶ್ಯ”ರೆಂದು ಪರಿಗಣಿಸಲ್ಪಟ್ಟ ಕಾರಣ ಕೇರಿಯ ಕುಟುಂಬಗಳಿಗೆ ಊರಿನ ದೇವಸ್ಥಾನಗಳಲ್ಲಿ ಅಥವಾ ಹೋಟೆಲುಗಳಲ್ಲಿ ಪ್ರವೇಶವಿರಲಿಲ್ಲ.
೨೦೨೧ರಲ್ಲಿ, ಈ ಕುಟುಂಬಗಳು ಆಡಳಿತ ಯಂತ್ರಕ್ಕೆ ಮನವಿ ಸಲ್ಲಿಸಿ, ಸಾರ್ವಜನಿಕ ಸ್ಥಳಗಳು ಮತ್ತು ದೇವಾಲಯಗಳ ಮೇಲಿನ ತಮ್ಮ ಹಕ್ಕನ್ನು ಸ್ಥಾಪಿಸಲು ದೇವಸ್ಥಾನಗಳನ್ನು ಪ್ರವೇಶಿಸಿದರು. ಈ ಧೈರ್ಯದ ಕೃತ್ಯದಿಂದಾಗಿ ಅವರು ಕೆಲಸ ಕಳೆದುಕೊಂಡರು, ಏಕೆಂದರೆ ಬಹುತೇಕ ಉದ್ಯೋಗದಾತರು ಮೇಲ್ಜಾತಿಗೆ ಸೇರಿದವರಾಗಿದ್ದರು. ಆದರೆ ಈಗ ಈ ಕುಟುಂಬಗಳು ಸಾವಿತ್ರಿಬಾಯಿ ಫುಲೆ ಮಹಿಳಾ ಸಹಕಾರ ಸಂಘದ ಬೆಂಬಲ ಮತ್ತು ತರಬೇತಿಯಿಂದ ಅಣಬೆ ಕೃಷಿಯ ಮೂಲಕ ಸ್ವಾವಲಂಬಿಗಳಾಗಿದ್ದಾರೆ. “ಕೇರಿ”ಯ ಜನರ ಈ ಒಕ್ಕೂಟವು ತಮ್ಮ ಕಥೆಗಳನ್ನು ತಮ್ಮದೇ ಧ್ವನಿಯಲ್ಲಿ ಹೇಳಲು ನಿರ್ಧರಿಸಿತು