ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯುತ್ತದೆ
ಸಾಮಾನ್ಯ ಪ್ರವೇಶ ಉಚಿತವಾಗಿರುತ್ತದೆ, ಪ್ರದರ್ಶನಗಳಿಗೆ ಟಿಕೆಟ್ ಇರುತ್ತದೆ
ಕಸ್ತೂರ್ಬಾ ರಸ್ತೆ, ಬೆಂಗಳೂರು, 560001
ಕಬ್ಬನ್ ಪಾರ್ಕ್, ವಿಧಾನ ಸೌಧ
ದೇಶದ ಪ್ರಮುಖ ವಾಸ್ತುಶಿಲ್ಪ ಸಂಸ್ಥೆ ಮ್ಯಾಥ್ಯೂ ಅಂಡ್ ಘೋಷ್ ಅವರಿಂದ ವಿಶಿಷ್ಟವಾಗಿ ವಿನ್ಯಾಸಗೊಂಡಿರುವ MAP ಕಟ್ಟಡ ಬೆಂಗಳೂರಿನ ಹೃದಯಭಾಗದಲ್ಲಿ ನೆಲೆಗೊಳ್ಳಲಿದೆ. ಕಟ್ಟಡವು ಪರಿಸರ ಸ್ನೇಹಿಯಾಗಿ ರೂಪುಗೊಂಡಿದ್ದು, ಬಳಕೆದಾರರಿಗೆ ಸ್ನೇಹಿಯಾಗಿರುವಂತೆ ಗಮನ ನೀಡಿ ವಿನ್ಯಾಸ ಮಾಡಲಾಗಿದೆ.
ಭಾರತೀಯ ಕಲೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ 60,000ಕ್ಕೂ ಮಿಕ್ಕಿ ಕಲಾಕೃತಿಗಳ ಬೆಳೆಯುತ್ತಿರುವ ಸಂಗ್ರಹವನ್ನು ಹೊಂದಿರುವ MAP, ತನ್ನ ನೋಡುಗರಿಗೆ ಸಮಗ್ರವಾದ ರಸದೌತಣವನ್ನು ಬಡಿಸಲಿದೆ. 10ನೇ ಶತಮಾನದಿಂದ ಈವತ್ತಿನ ತನಕದ, ಅದರಲ್ಲೂ ಪ್ರಮುಖವಾಗಿ ದಕ್ಷಿಣ ಏಷ್ಯಾ ಮೂಲದ ಪೇಂಟಿಂಗ್ಗಳು, ಶಿಲ್ಪಗಳು, ಜವಳಿ, ಛಾಯಾಚಿತ್ರಗಳು ಸೇರಿದಂತೆ, ಹಲವು ಕಲಾಕೃತಿಗಳು ಇಲ್ಲಿ ಪ್ರದರ್ಶಿತಗೊಳ್ಳಲಿವೆ,